ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ದಾಳಿ ನಡೆದ ಬಳಿಕ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಭಾರತೀಯ ಸೇನೆಯ ಯಶಸ್ವಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಪ್ರತೀಕಾರದ ಯುದ್ಧಗಳು ನಡೆಯುತ್ತಲೇ ಇದೆ. ಈ ಸಂದರ್ಭ ಪ್ರತಿಯೊಬ್ಬ ಭಾರತೀಯ ದೇಶಕ್ಕಾಗಿ ಪ್ರಾರ್ಥಿಸುತ್ತಿದ್ದಾನೆ. ಈ ಮಧ್ಯೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ದೇಶ ವಿರೋಧಿ ಪೋಸ್ಟ್ ಹಾಕಿದ್ದು ಕರಾವಳಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಬೆಳ್ತಂಗಡಿಯ ಬೆಳಾಲು ನಿವಾಸಿ ರೇಷ್ಮಾ ಎಂಬಾಕೆ ಮಂಗಳೂರಿನ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಳೆ. ಇವಳು ಇನ್ಸ್ಟಾಗ್ರಾಂನಲ್ಲಿ ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿನ ನನ್ನೊಳಗಿನ ದೀಪ ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು…ಎಲ್ಲೆಲ್ಲೂ ಕತ್ತಲು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಭಾರತದ ಸೇಡಿನ ದಾಳಿ ವಿರೋಧಿಸಿ ಭಯೋತ್ಪಾದನೆಯನ್ನು ಸಮರ್ಥಿಸುವ ಹೀನ ಮನಸ್ಥಿತಿಗೆ ಧಿಕ್ಕಾರವಿರಲಿ ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಭಾರತ ದೇಶದ ಮೇಲೆ ನನಗೆ ಹೆಮ್ಮೆಯಿದೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತ. ಇದರ ಮೇಲೆ ಭಯೋತ್ಪಾದನೆಯ ಕರಿ ನೆರಳು ಬೀಳದಿರಲಿ, ಸಾವು ನೋವು ಇಲ್ಲವಾಗಲಿ ಎಂಬುವುದೇ ನನ್ನ ಉದ್ದೇಶ ಎಂದು ಬರೆದುಕೊಂಡಿದ್ದಾಳೆ. ವಿದ್ಯಾರ್ಥಿನಿಯ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗಿದೆ.


