ಬೆಂಗಳೂರು: ಸರ್ಕಾರಿ ಕೆಲಸದ ಅಭಿಲಾಷೆಯಲ್ಲಿದ್ದರೆ ಇದೊಂದು ನಿಮಗೆ ಸುವರ್ಣವಕಾಶ..ಕೇಂದ್ರ ಲೋಕಸೇವಾ ಆಯೋಗ ಹಿರಿಯ ಪಶು ವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಪ್ರಕಟಿಸಿದೆ.
ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುತ್ತಿದ್ದು ಅರ್ಜಿ ಸಲ್ಲಿಸಲು ಇದೇ ಮೇ. ಹದಿನೈದು ಕೊನೆಯ ದಿನಾಂಕವಾಗಿದೆ.
ಒಟ್ಟು ನಲ್ವತ್ತು ಹುದ್ದೆಗಳಿದ್ದು ಆನ್ಲೈನ್ ಮುಖೇನ ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ ನಿಯಮಾನುಸಾರ ಇರಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ ಎಂಬುದಕ್ಕೆ ಅನುಗುಣವಾಗಿ ವಿದ್ಯಾರ್ಹತೆ, ವೇತನ ಇರಲಿದೆ.


