ಉಡುಪಿ : ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀ ಮುರಳಿ ಯವರು (ಉಗ್ರಂ ಚಿತ್ರ ಖ್ಯಾತಿ) ಮತ್ತು ಅಜಯರಾವ್ (ಯುದ್ಧಕಾಂಡ ಚಿತ್ರ ಖ್ಯಾತಿ) ರವರು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಪೂಜ್ಯ ಪರ್ಯಾಯ ಯತಿದ್ವಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಇಬ್ಬರು ಚಿತ್ರನಟರೂ ಶ್ರೀಗಳಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.



