ನವದೆಹಲಿ: ಪೆಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಸಿಂಧೂರ ಆಪರೇಷನ್ ಎಂಬ ಯಶಸ್ವಿ ಕಾರ್ಯಾಚರಣೆ ನಡೆಸಿತು. ಇದೀಗ ನಿನ್ನೆ ಮತ್ತೆ ಪ್ರತೀಕಾರಕ್ಕಾಗಿ ಪಾಕಿಸ್ತಾನದಿಂದ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿದೆ. ಭಾರತವು ಈ ದಾಳಿಗಳನ್ನು ಯಶಸ್ವಿಯಾಗಿ ವಿಳಪಗೊಳಿಸಿದೆ.
ಪಾಕಿಸ್ತಾನದ ಒಂದು ಎಫ್- ಹದಿನಾರು ಫೈಟರ್ ಜೆಟ್ ಮತ್ತು ಜೆಎಫ್-೧೭ ಜೆಟ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಒಂದು ಡೋನ್ ಜಮ್ಮು ನಾಗರಿಕ ವಿಮಾನ ನಿಲ್ದಾಣವನ್ನು ಅಪ್ಪಳಿಸಿದೆ.
ರಾಜಸ್ಥಾನದಲ್ಲೂ ಇವರ ದಾಳಿಯನ್ನು ಭಾರತ ಫೇಲ್ ಆಗುವಂತೆ ಮಾಡಿತು. ಕನಿಷ್ಠ ಎಂಟು ಕ್ಷಿಪಣಿಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ತಡೆಹಿಡಿಯಿತು. ಚಂಡೀಘಡದಲ್ಲೂ ದಾಳಿಯ ಸದ್ದು ಕೇಳಿಬಂದಿದೆ.


