ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಕಾವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪಾಕಿಸ್ತಾನದ ಸೇನಾ ಪಡೆಯು ನಡೆಸಿದ ತೀವ್ರ ದಾಳಿಯ ಪರಿಣಾಮ ಜಿಲ್ಲಾಧಿಕಾರಿ ಸಾವನ್ನಪ್ಪಿದ್ದು ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ನಿವಾಸಕ್ಕೆ ಪಾಕ್ ನ ಶೆಲ್ ಬಡಿದ ಪರಿಣಾಮ ಹೆಚ್ಚುವರಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಮತ್ತಿಬ್ಬರು ಅಧಿಕಾರಿಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಹುತಾತ್ಮ ರಾಜ್ ಕುಮಾರ್ ಅವರು ನಿನ್ನೆಯಷ್ಟೇ ನಡೆದ ಜಮ್ಮು ಸಿಎಂ ಸಭೆಯಲ್ಲಿ ಕೂಡಾ ಭಾಗಿಯಾಗಿದ್ದರು. ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಸಂತಾಪವನ್ನು ಸೂಚಿಸಿದ್ದಾರೆ.

