ಬೇಸಿಗೆಯಲ್ಲಿ ನಾವು ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಬೇಸಿಗೆಯಲ್ಲಿ ಚರ್ಮದ ಸಮಸ್ಯೆ ಕೂಡಾ ಕಾಡುವುದು ಸಹಜ. ಜೊತೆಗೆ ದೇಹ ಕೂಡಾ ಹೀಟ್ ಆಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಾವು ಹೋಗಲಾಡಿಸಲು ಮನೆಯಲ್ಲೇ ಸುಲಭ ರೀತಿಯಲ್ಲಿ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಬಹುದು.
ಬೇಸಿಗೆಯಲ್ಲಿ ಒಣದ್ರಾಕ್ಷಿ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಇದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಅದರಲ್ಲೂ ರಾತ್ರಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ ಎಂದು ವೈದ್ಯರು ಕೂಡಾ ಸಲಹೆ ನೀಡುತ್ತಾರೆ.
ಅನೇಕ ಪೋಷಕಾಂಶಭರಿತ ಈ ಒಣದ್ರಾಕ್ಷಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ದೇಹವನ್ನು ಸದಾ ಚಟುವಟಿಕೆಯಿಂದಿರಿಸುತ್ತದೆ. ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಅನ್ನು ಕೂಡಾ ಇದು ಪೂರೈಸುತ್ತದೆ.
ದೇಹವನ್ನು ಹೈಡ್ರೇಟ್ ಆಗಿಡಲು ಸಹಕರಿಸುವ ಒಣದ್ರಾಕ್ಷಿಯನ್ನು ಯಾರು ತಿಂದರೂ ಉತ್ತಮ. ಏಕೆಂದರೆ ಇದು ಜೀರ್ಣಕ್ರಿಯೆಯನ್ಜು ಸುಧಾರಿಸಿ, ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳುತ್ತದೆ. ಸಾಕಷ್ಟು ಪ್ರಯೋಜನವಿರುವ ಇದನ್ನು ಮಿತಿಯಲ್ಲಿ ಸೇವಿಸಿದರೆ ಇನ್ನೂ ಉತ್ತಮ.

