ಮಂಗಳೂರು: ಮುಂದಿನ ನಾಲ್ಕು ದಿನಗಳ ಕಾಲ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ಅಥವಾ ಡ್ರೋನ್ ನಲ್ಲಿ ಶೂಟಿಂಗ್ ನಡೆಸುವುದನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ನಿನ್ನೆ ಖಡಕ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬರದಂತೆ ಮತ್ತು ಕಾನೂನು ಉಲ್ಲಂಘನೆ ಆಗದಂತೆ ತಡೆಯಲು ಈ ಸೂಚನೆ ಹೊರಡಿಸಲಾಗಿದೆ.
ಇಂದು ಸಂಜೆ ನಾಲ್ಕು ಗಂಟೆಯಿಂದ ಮೇ. ೧೪ರ ಸಂಜೆ ನಾಲ್ಕು ಗಂಟೆಯವರೆಗೆ ಡ್ರೋನ್ ಹಾರಾಟ ನಿಷೇಧಿಸಿ ಡ್ರೋನ್ ನಿಯಮದನ್ವಯ ಆದೇಶ ಜಾರಿ ಮಾಡಲಾಗಿದೆ.

