ನವದೆಹಲಿ: ಪೆಹಲ್ಗಾಮ್ ನಲ್ಲಿ ನಡೆದ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಲೇ ಇರುತ್ತದೆ. ಈ ಸಂದರ್ಭ ನಿನ್ನೆ ಸಂಜೆ ಭಾರತ-ಪಾಕಿಸ್ತಾನ ಮಧ್ಯೆ ಸೇನಾ ಸಂಘರ್ಷಕ್ಕೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಭಾರತ ತನ್ನ ನೀಚ ಬುದ್ಧಿಯನ್ನು ತೋರಿಸಿದೆ.
ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಗಡಿ ಭಾಗದ ನಾಲ್ಕು ರಾಜ್ಯಗಳ ಮೇಲೆ ಡೋನ್ ಗಳ ದಾಳಿ ನಡೆಸಿದೆ. ನಿಯಮವನ್ನು ಉಲ್ಲಂಘಿಸಿದೆ. ಈ ಹೀನಾಯ ಕೃತ್ಯವನ್ನು ಭಾರತ ಖಂಡಿಸುತ್ತದೆ. ಇದಕ್ಕೆ ಸೂಕ್ತ ತಿರುಗೇಟು ಕೂಡಾ ನೀಡ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ನಿನ್ನೆ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾಕಿಸ್ತಾನವು ತನ್ನ ಸೇನೆಯ ಆಕ್ರಮಣವನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ತಕ್ಕ ಉತ್ತರ ಕೊಡಲು ನಾವು ರೆಡಿಯಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

