ನಟ ಯಶ್ ಅವರ ಬದುಕಿಗೆ ಹೊಸ ತಿರುವು ನೀಡಿದ ಸಿನಿಮಾ ಅಂದ್ರೆ ಕೆಜಿಎಫ್ 3. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಈ ಚಿತ್ರದಿಂದ ಕೋಟ್ಯಾಧಿಪತಿಯೂ ಆದರು. ನಂತರ ಬಂದ ಕೆಜಿಎಫ್ 2 ಕೂಡಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿತು. ಇದೀಗ ಪ್ರಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 3 ಬಗ್ಗೆ ಹೊಸ ಅಪ್ಡೇಟ್ ವೊಂದನ್ನು ನೀಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಟಾಕ್ಸಿಕ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ 2 ರಿಲೀಸ್ ಆಗಿ ಮೂರು ವರ್ಷ ಕಳೆದರೂ ಕೂಡಾ ವಿಶ್ವ ಮಟ್ಟದಲ್ಲಿ ಚಾತುರ್ಯ ಮೂಡಿಸುವ ಕೆಜಿಎಫ್ 3 ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ತನ್ನ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ವೀಡಿಯೋವಂದನ್ನು ಹಂಚಿಕೊಂಡಿದ್ದು ಈ ಮುಖೇನವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

