ಮುಂಬೈ: ಈಗಾಗಲೆ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಕೇಳಿ ಬಂದಿದೆ.
ಇದೀಗ ಕ್ರಿಕೆಟ್ ಲೋಕದ ದಿಗ್ಗಜ ಅದೆಷ್ಟೋ ಅಭಿಮಾನಿಗಳ ಫೇವರೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಹದಿನಾಲ್ಕು ವರ್ಷದ ಟೆಸ್ಟ್ ಕ್ರಿಕೆಟ್ ವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇವರು ಇನ್ಸ್ಟಾಗ್ರಾಂನಲ್ಲಿ ನಿವೃತ್ತಿ ಕುರಿತಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಇವರ ಹದಿನಾಲ್ಕು ವರ್ಷದ ಟೆಸ್ಟ್ ಕೆರಿಯರ್ ಅಂತ್ಯಗೊಂಡಿದೆ. ಇವರ ಈ ನಿರ್ಧಾರ ಫ್ಯಾನ್ಸ್ ನಲ್ಲಿ ಬೇಸರ ತಂದಿದೆ.

