ಮಂಗಳೂರು: ಮಾವಿನಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಡ್ರೈವರ್ ನ ಕಂಟ್ರೋಲ್ ತಪ್ಪಿ ಹೊಂಡಕ್ಕೆ ಬಿದ್ದ ಘಟನೆ ಮಂಗಳೂರಿನ ಪಚ್ಚನಾಡಿ ಬೋಂದೆಲ್ ರಸ್ತೆಯಲ್ಲಿ ನಡೆದಿದೆ.
ಉಡುಪಿಯಲ್ಲಿ ನಡೆಯಲಿರುವ ಮಾವು ಮೇಳಕ್ಕೆ ಲಾರಿಯಲ್ಲಿ ಮಾವಿನ ಹಣ್ಣುಗಳನ್ನು ಸಾಗಿಸುತ್ತಿದ್ದಾಗ ವಾಮಂಜೂರಿನಿಂದ ಪಚ್ಚನಾಡಿ ಕಡೆಗೆ ಸಂಚರಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಲಾರಿ ಡ್ರೈವರ್ ರಫೀಕ್ ಉಳಾಯಿಬೆಟ್ಟು ಅವರಿಗೆ ಗಾಯಗಳಾಗಿದ್ದು ಸದ್ಯ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

