ಬಿಗ್ಬಾಸ್ ಸ್ಪರ್ಧಿ, ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಕರೆಯಲಾಗುವ ಚೈತ್ರಾ ಕುಂದಾಪುರ ಅವರು ಸುಮಾರು ಹನ್ನೆರಡು ವರ್ಷದಿಂದ ಪ್ರೀತಿಸಿದ್ದ ಯುವಕನ ಜೊತೆ ಮೊನ್ನೆ ತಾನೇ ಅದ್ಧೂರಿಯಾಗಿ ಮದುವೆ ಆದರು. ಈ ಬೆನ್ನಲ್ಲೇ ಅವರ ತಂದೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಚೈತ್ರಾ ಮದುವೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರ ತಂದೆ ಬಾಲಕೃಷ್ಣ ನಾಯ್ಕ್ ನನ್ನನ್ನು ಅವಳು ಮದುವೆಗೆ ಕರೆದಿಲ್ಲ. ನಾನು ಹೋಗಿಲ್ಲ. ಚೈತ್ರಾ ಅವಳ ಗಂಡ ಇಬ್ಬರೂ ಕಳ್ಳರೇ…ಅವರಿಗೆ ನನ್ನ ಪತ್ನಿಯ ಬೆಂಬಲವೂ ಇದೆ. ಹಣದ ಆಸೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ ಎಂದು ಹೇಳಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ಚೈತ್ರಾ ಬಿಗ್ಬಾಸ್ ಗೆ ಹೋದಾಗಲೂ ಹೇಳಿಲ್ಲ. ನನ್ನ ಹೆಂಡ್ತಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ಈಗ ನಾನೊಬ್ಬ ಅನಾಥ ಎಂದು ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.
ತಂದೆಗೇ ಅನ್ನ ಹಾಕದವಳು, ತಂದೆಯನ್ನು ಗೌರವಿಸದವಳು ಇನ್ನೇನು ದೇಶ ಸೇವೆ ಮಾಡ್ತಾಳೆ…ಜನ ಅವಳಿಗೂ ಗೌರವ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

