ಮಣಿಪಾಲ: ಮಣಿಪಾಲದ ಡಿಸಿ ಕಚೇರಿ ಬಳಿಯ ಕ್ರಿಸ್ಟಲ್ ಹಬ್ ಕಟ್ಟಡದ ಮೊದಲ ಮಹಡಿಯಲ್ಲಿ ಸುಮಾರು 13 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಖ್ಯಾತ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಸಂಸ್ಥೆಯ 2024-25ನೇ ಸಾಲಿನ ಪ್ರಶಿಕ್ಷಣಾರ್ಥಿ ಶಿಕ್ಷಕಿಯರಿಗೆ ಉಡುಪಿ, ದ.ಕ ಜಿಲ್ಲೆಯ ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 90ರಷ್ಟು ಉದ್ಯೋಗ ಲಭಿಸಿದೆ.
ಮಹಿಳೆಯರು ಮುಖ್ಯವಾಗಿ ಸ್ವಾವಲಂಬಿಗಳಾಗಬೇಕೆನ್ನುವ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಪ್ರಾಯೋಗಿಕ ತರಬೇತಿ ನೀಡಿ ಉದ್ಯೋಗ ಪಡೆದುಕೊಳ್ಳಲು ದಾರಿಯಾಗುತ್ತಿದೆ.
ಇದೀಗ ಈ ಸಂಸ್ಥೆಯಲ್ಲಿ ಕೋರ್ಸ್ ಗೆ ಪ್ರವೇಶಾತಿ ಆರಂಭವಾಗಿದ್ದು ಪಿಯುಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.


