ಮಲ್ಪೆ: ಇದೀಗ ಬೇಸಿಗೆ ರಜೆ ಇರುವ ಕಾರಣ ಪ್ರವಾಸಿಗರ ಆಕರ್ಷಣೀಯ ತಾಣವಾದ ಮಲ್ಪೆ ಸೈಂಟ್ ಮೆರೀಸ್ ದ್ವೀಪಕ್ಕೆ ಅನೇಕ ಜನ ಪ್ರವಾಸ ಬರುತ್ತಿರುತ್ತಾರೆ. ಇದೀಗ ದ್ವೀಪ ಪ್ರವೇಶಕ್ಕೆ ನಾಲ್ಕು ತಿಂಗಳುಗಳ ಕಾಲ ನಿರ್ಬಂಧ ಹೇರಲಾಗಿದೆ. ಜೊತೆಗೆ ಎಲ್ಲಾ ಕ್ರೀಡೆಗಳನ್ನು ಕೂಡಾ ಸ್ಥಗಿತಗೊಳಿಸಲಾಗಿದೆ.
ಇನ್ನು ಮಳೆಗಾಲ ಸಮೀಪಿಸುತ್ತಿರುವುದರಿಂದ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ದ್ವೀಪಕ್ಕೆ ತೆರಳುವುದು ಅಪಾಯಕಾರಿ ಆಗಿರುವುದರಿಂದ ಪ್ರತೀ ವರ್ಷ ಮೇ. ಹದಿನೈದರಿಂದ ಸಪ್ಟೆಂಬರ್ ಹದಿನೈದರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸುತ್ತದೆ.
ನಿಯಮಗಳ ಪ್ರಕಾರ ಸಮುದ್ರ ತೀರದ ವಾತಾವರಣವನ್ನಾಧರಿಸಿ ಜೂನ್ ಒಂದರವರೆಗೆ ನೀರಿಗಿಳಿಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಚಂದ್ರಶೇಖರ್ ಅವರು ಹೇಳಿದ್ದಾರೆ.

