ಮಂಗಳೂರು: ಮೋದಿ ಹೇಳಿದ್ದೆಲ್ಲಾ ವೇದವಾಕ್ಯ ಅಂತ ನಾವು ನಂಬೇಕಾ…?? ಸುಳ್ಳನ್ನು ದಂತ ಕಥೆಯ ರೂಪದಲ್ಲಿ ಹೇಳೋದ್ರಲ್ಲಿ ಪ್ರಧಾನಿ ಮೋದಿ ಅತ್ಯಂತ ಜಾಣ. ಯುದ್ಧದ ವಿಚಾರದಲ್ಲಿ ಸರ್ವಪಕ್ಷಗಳ ಸಭೆ ಕರೆದು ಮೋದಿ ಜನರ ಪ್ರಶ್ನೆಗೆ ಉತ್ತರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಟುವಾಗಿ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪಾಕ್ ವಿಚಾರದಲ್ಲಿ ಜನ ಸ್ಪಷ್ಟ ಉತ್ತರ ಅಪೇಕ್ಷೆ ಮಾಡುತ್ತಿದ್ದಾರೆ. ಟರ್ಕಿ ಜೊತೆ ವ್ಯಾಪಾರ ನಿಲ್ಲಿಸ್ತೇವೆ ಎನ್ನುವ ಮೋದಿ ಚೀನಾ, ಅಮೇರಿಕಾದ ಬಗ್ಗೆ ಯಾಕೆ ಮಾತಾಡಲ್ಲ ಎಂದು ರೊಚ್ಚಿಗೆದ್ದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ಸಿಗರು ದೇಶದ ಸೈನ್ಯವನ್ನು ಟೀಕೆ ಮಾಡುತ್ತಿಲ್ಲ. ಆದರೆ ಬಿಜೆಪಿಯವರು ಈ ಘಟನೆಯನ್ನೂ ಹಿಂದು-ಮುಸ್ಲಿಂ ಮಾಡ್ಲಿಕ್ಕೆ ಹೊರಟಿದ್ದಾರಲ್ವ ಅದಕ್ಕೆ ನಮ್ಮ ವಿರೋಧ ಇರೋದು. ಪ್ರಧಾನಿ ಯಾವುದಕ್ಕೂ ಸರಿ ಉತ್ತರ ಕೊಡಲ್ಲ..ಅವ್ರಿಗೆ ಪತ್ರಕರ್ತರೆಂದರೆ ಕ್ಯಾರೇ ಇಲ್ಲ ಎಂದು ಟೀಕಿಸಿದರು.

