ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಟ್ರೋಲ್ ಆಗಿದ್ದ ದಿವ್ಯಾ ವಸಂತ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.
ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ದಿವ್ಯಾ ಮತ್ತು ಅವರ ತಂಡದವರು ಸೇರಿ ಅಶ್ಲೀಲ ವೀಡೊಯೋಗಳಿವೆ…ಬೇಡಿಕೆ ಇಟ್ಟಷ್ಟು ಹಣ ನೀಡಿಲ್ಲ ಅಂದ್ರೆ ವೈರಲ್ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುರೂಜಿ ಅವರು ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅವರು ನೀಡಿದ ಹಣ ನಾನು ನೀಡದೆ ಇದ್ದಾಗ ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದಿದ್ದಾರೆ.

