ಬೆಂಗಳೂರು: ಬೆಂಗಳೂರು- ಮಂಗಳೂರು ಮಾರ್ಗದಲ್ಲಿ ಪ್ರಯಾಣಿಸುವ ರೈಲ್ವೇ ಪ್ರಯಾಣಿಕರಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಸಿಲಿಕಾನ್ ಸಿಟಿ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚಾರ ಮಾಡುವ ಕೆಲವು ರೈಲುಗಳನ್ನು ರದ್ದು ಮಾಡಲಾಗುತ್ತಿದೆ.
ಹಾಸನದ ಸಕಲೇಶಪುರ-ಸುಬ್ರಹ್ಮಣ್ಯ ಸಂಚಾರ ಮಾರ್ಗದಲ್ಲಿ ಕಾಮಗಾರಿ ನಡೆಯುವುದರಿಂದ ಈ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಜೂನ್ ಪ್ರಾರಂಭದಿಂದ ನವೆಂಬರ್ ವರೆಗಡ ನಾಲ್ಕು ತಿಂಗಳು ಕಾಲ ಕಾಮಗಾರಿ ನಡೆಯಲಿದೆ.
ಒಟ್ಟು ಆರು ತಿಂಗಳುಗಳ ಕಾಲ ರೈಲು ಸಂಚಾರ ಇರುವುದಿಲ್ಲ ಎಂಬ ಮಾಹಿತಿ ಲಭಿಸಿದೆ. ಮೇ 31ರಿಂದ ನವೆಂಬರ್ ವರೆಗೆ ಪ್ರತೀ ಶನಿವಾರದಂದು ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್ ಗೆ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಕೂಡಾ ರದ್ದಾಗಲಿದೆ.

