ಮಂಗಳೂರು: ಮಂಗಳೂರು ಹೊರ ವಲಯದ ಬಜ್ಪೆಯಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನಂತರ ನಡೆದ ಬೆಳವಣಿಗೆಯಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಶಂಖನಾದ ಇನ್ಸ್ಟಾಗ್ರಾಂ ಪೇಜ್ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆ ಪೇಜ್ ನ್ನು ನಿಷೇಧಿಸಲಾಗಿದೆ.
ಈ ಪೇಜ್ ನಲ್ಲಿ ಹನ್ನೊಂದು ಸಾವಿರ ಫಾಲೋವರ್ಸ್ ಗಳಿದ್ದು ಸುಹಾಸ್ ಹತ್ಯೆ ಖಂಡಿಸಿ ಪ್ರತಿಭಟನೆಗಳ ಪೋಸ್ಟರ್ ಮತ್ತು ಹತ್ಯೆ ಪೊಲೀಸ್ ಇಲಾಖೆಯ ವೈಫಲ್ಯ ಎಂದು ಬಿಂಬಿಸುವ ರೀತಿಯಲ್ಲಿ ಪೋಸ್ಟರ್ ನ್ನು ಶೇರ್ ಮಾಡಲಾಗಿತ್ತು.
ಜನರನ್ನು ಉದ್ರೇಕಿಸಿ ಒಬ್ಬರಿಗೊಬ್ಬರು ದ್ವೇಷ ಭಾವನೆ ಬರುವಂತೆ ಮಾಡಿದ ಕಾರಣಕ್ಕೆ ಈ ಪೇಜ್ ನ ಸಂಘಟಕರ ವಿರುದ್ಧ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾ ಎನ್ಫೋರ್ಸ್ ಮೆಂಟ್ ಏಜೆನ್ಸಿ ಶಂಖನಾದ ಪೇಜ್ ನ್ನು ರದ್ದುಪಡಿಸಿದೆ.

