ಮಂಗಳೂರು: ರೈಲಿನಲ್ಲಿ ಕುಳಿತ್ತಿದ್ದಂತೆ ವ್ಯಕ್ತಿಯೋರ್ವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಸುಮಾರು ಮೂರು ಮೂವತ್ತರ ವೇಳೆಗೆ ಮಂಗಳೂರು-ಚೆನ್ನೈ ಎಕ್ಸ್ಪ್ರೆಸ್ ನ ಜನರಲ್ ಕೋಚ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸುಮಾರು ನಲ್ವತ್ತೈದು ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿದೆ.
ಅವರು ಕುಸಿದು ಬಿದ್ದಾಗ ಕೂಡಲೇ ರೈಲ್ವೇ ಸಿಬ್ಬಂದಿ ವ್ಯಕ್ತಿಗೆ ಸಿಪಿಆರ್ ಕೊಡಿಸಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


