ಉಡುಪಿ: ಮಳೆಗಾಲ ಬಂತೆಂದರೆ ತುಳುವರಿಗೆ ಒಂದು ರೀತಿಯ ಮಳೆಗಾಲ ಶುರುವಾದ ಸಂದರ್ಭ ಮೀನು ಹಿಡಿಯಲು ಯುವಕರೆಲ್ಲ ಸೇರಿ ಹೋಗೋದು, ರಾತ್ರಿ ಮೀನು ಸಿಗೋವರೆಗೂ ಗಾಳ ಹಾಕೋದು ಅಂದ್ರೆ ಅದು ಒಂಥರಾ ಮಜ. ಇದೀಗ ಉಡುಪಿಯ ಕುರ್ಕಾಲು ಪರಿಸರದಲ್ಲಿ ಕಳೆದ ರಾತ್ರಿ ಭಾರೀ ಗಾತ್ರದ ಮುಗುಡು ಮೀನುಗಳು ಸಿಕ್ಕಿವೆ.
ಮಳೆಗಾಲದಲ್ಲಿ ಹೊಳ್ಳ, ಕೆರೆ, ಕಾಲುವೆಗಳು ತುಂಬಿ ಹರಿಯುತ್ತದೆ. ಮಳೆಗಾಲ ಆರಂಭವಾಗುವ ಮೊದಲ ಒಂದು ವಾರದಲ್ಲಿ ಮೀನುಗಳು ಗದ್ದೆಗಿಳಿಯುತ್ತದೆ. ಈ ಸಂದರ್ಭ ಮೀನುಗಳನ್ನು ರಾತ್ರಿ ಟಾರ್ಚ್ ಹಿಡಿದು ಹಿಡಿಯಲಾಗುತ್ತದೆ.
ಇದೀಗ ಉಡುಪಿ ಭಾಗದ ಯುವಕರು ಮೀನು ಹಿಡಿಯಲು ಹೋಗಿದ್ದು ಅನೇಕ ಬೃಹತ್ ಗಾತ್ರದ ಮುಗುಡು ಮೀನುಗಳು ಸಿಕ್ಕಿವೆ. ಸಮುದ್ರ ಮತ್ತು ನದಿ ನೀರಿಗೆ ಹೋಲಿಸಿದರೆ ಈ ಮೀನುಗಳು ತಿನ್ನಲು ಬಹಳ ರುಚಿಯಾಗಿರುತ್ತದೆ. ಕರಾವಳಿಯಲ್ಲಿ ಪ್ರತೀ ಬಾರಿ ಮಳೆಗಾಲಕ್ಕೆ ಈ ರೀತಿ ಮೀನು ಹಿಡಿಯಲು ಹೋಗುವುದೊಂದು ವಾಡಿಕೆ.

