ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಭಾರತ ಶತ್ರುರಾಷ್ಟ್ರದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ಪ್ರತಿಷ್ಠಿತ ಫಿಲಂ ಪೆಸ್ಟಿವಲ್ ನಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಹಣೆಗೆ ಕುಂಕುಮವಿಟ್ಟು ಭಾರತವನ್ನು ಬೆಂಬಲಿಸಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಒಬ್ಬಾತ ಸಿಹಿತಿಂಡಿಯ ಹೆಸರಿನಲ್ಲಿದ್ದ ಪಾಕ್ ಎನ್ನುವ ಹೆಸರನ್ನೇ ತೆಗೆದು ಹಾಕಿದ್ದಾನೆ.
ಜೈಪುರದ ಸ್ವೀಟ್ಸ್ ಅಂಗಡಿಯ ಮಾಲೀಕರೊಬ್ಬರು ಯಾವೆಲ್ಲ ತಿಂಡಿಗಳ ಹೆಸರಿನಲ್ಲಿ ಪಾಕ್ ಎನ್ನುವ ಹೆಸರು ಬರುತ್ತೋ ಅದನ್ನು ತೆಗೆದು ಶ್ರೀ ಎಂದು ಸೇರಿಸಿದ್ದಾರೆ. ಪ್ರಖ್ಯಾತ ಸಿಹಿತಿಂಡಿಗಳಾದ ಮೋತಿ ಪಾಕ್, ಮೈಸೂರು ಪಾಕ್, ಆಮ್ ಪಾಕ್ ಈ ಎಲ್ಲದ್ರಲ್ಲಿ ಪಾಕ್ ಎನ್ನೋ ಹೆಸ್ರು ಕಾಮನ್ ಆಗಿದೆ.
ಆದರೆ ಇನ್ಮುಂದೆ ಆ ಹೆಸರು ತೆಗೆದು ಅದರ ಬದಲಿಗೆ ಮೋತಿ ಶ್ರೀ, ಆಮ್ ಶ್ರೀ, ಮೈಸೂರು ಶ್ರೀ ಎಂದು ಕರೆಯುವಂತೆ ಮನವಿ ಮಾಡಿದ್ದಾರೆ. ಜೈಪುರದಲ್ಲಿ ಅನೇಕ ಅಂಗಡಿ ಮಾಲಕರು ಇದೇ ರೀತಿ ಹೆಸರು ಬದಲಾವಣೆ ಮಾಡಿದ್ದಾರಂತೆ. ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

