ಕಾರ್ಕಳ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಸಹೋದರ ಸುಜಿತ್ ಕುಮಾರ್ ನೆಕ್ಲಾಜೆ ಗುತ್ತು ಅವರು ನಿನ್ನೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಅವರ ಅಂತಿಮ ವಿಧಿ ವಿಧಾನವು ನಿನ್ನೆ ಸಂಜೆ ನೆಕ್ಲಾಜೆ ಅವರ ಮನೆಯಲ್ಲಿ ನೆರವೇರಿದೆ. ಇವರು ಅನಾರೋಗ್ಯದ ಕಾರಣಕ್ಕೆ ಹದಿನೈದು ದಿನದ ಹಿಂದೆ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕರಿಯಕಲ್ಲು ಹಿಂದೂ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆದಿದೆ.

