ಕಿನ್ನಿಗೋಳಿ: ಹಲಸಿನ ಕಾಯಿ ತೆಗೆಯಲು ಹೋದಾಗ ಆಯತಪ್ಪಿ ಮರದಿಂದ ಕಾಂಕ್ರೀಟ್ ರಸ್ತೆಗೆ ಬಿದ್ದು ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಿನ್ನಿಗೋಳಿ ಸಮೀಪದ ಬಾಬಕೋಡಿಯಲ್ಲಿ ನಡೆದಿದೆ.
ಕೆಮ್ಮಡೆ ಮೂಲದ ಪ್ರಸ್ತುತ ಕರ್ನಿರೆ ನಿವಾಸಿ ನಲ್ವತ್ತು ವರ್ಷದ ಹರೀಶ್ ಮೃತ ದುರ್ದೈವಿ. ಇವರು ನಿನ್ನೆ ಮಧ್ಯಾಹ್ನ ಇವರು ತೆಂಗಿನ ಕಾಯಿ ಕಿತ್ತು ಹಲಸಿನ ಕಾಯಿ ತೆಗೆಯಲು ಮರ ಹತ್ತಿದ್ದರು.
ಆಯತಪ್ಪಿ ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಮೃತ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


