ಹಾಸನ: ರಾಜ್ಯದಲ್ಲಿ ಈ ಬಾರಿ ಧಾರಾಕಾರವಾಗಿ ಮಳೆ ಸುರಿದಿದ್ದು ಮಾನ್ಸೂನ್ ಮಾರುತಗಳು ರಾಜ್ಯವನ್ನು ಪ್ರವೇಶಿಸಿವೆ. ನಿರಂತರ ಬಿರುಗಾಳಿ, ಮಳೆಯಿಂದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡೂ ಕಡೆ ಭೂಕುಸಿತ ಉಂಟಾಗಿದೆ.
ತಡೆಗೋಡೆ ನಿರ್ಮಿಸಿದ್ದರೂ ಕೂಡಾ ರಸ್ತೆ ಮೇಲೆ ಮಣ್ಣು ಕುಸಿದಿದ್ದು ಭೂಕುಸಿತ ಉಂಟಾಗಿದೆ. ಮಣ್ಣಿನ ಸಮೇತ ಮರಗಳು ಕೂಡಾ ನೆಲಕ್ಕೆ ಉರುಳುತ್ತಿವೆ.
ವಾರಾಂತ್ಯದಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕಿದೆ. ಪ್ರಯಾಣಿಕರು ಆದಷ್ಟು ತಮ್ಮ ಯೋಜನೆಯನ್ನು ಮುಂದೂಡುವುದು ಒಳ್ಳೆಯದು.


