ಕೋಮು ದಳ್ಳುರಿಗೆ ನಲುಗಿದ ಮಂಗಳೂರಿನಲ್ಲಿ ನಿನ್ನೆ ರಹೀಮ್ ಕೊಲೆಯಾದ ಬೆನ್ನಲ್ಲೇ, ಇಂದು ಸುರತ್ಕಲ್ ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಕೈಕಂಬದಲ್ಲಿ ಬೈಕ್ ಶೋರೂಂ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯೂ ಬೆಳಕಿಗೆ ಬಂದಿದೆ.
ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

