ಇಂಡಿಯಾ ಕ್ರಿಕೆಟ್ ಟೀಂ ಆಟಗಾರ ಶ್ರೇಯಸ್ ಅಯ್ಯರ್ ಅವರು ತಮ್ಮ ಅದ್ಭುತ ಪ್ರದರ್ಶನದ ಮುಖೇನ ಸಾವಿರಾರು ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಇವರ ಗರ್ಲ್ ಫ್ರೆಂಡ್ ಜೊತೆಗಿನ ಫೋಟೋ ಕೂಡಾ ಸಖತ್ ವೈರಲ್ ಆಗ್ತಾ ಇದೆ.
ಶ್ರೇಯಸ್ ಅಯ್ಯರ್ ಅವರ ವೈಯಕ್ತಿಕ ಜೀವನದ ಇಂಟ್ರೆಸ್ಟಿಂಗ್ ವಿಷಯವೊಂದು ಮುನ್ನೆಲೆಗೆ ಬಂದಿದೆ. ಇವರು ತ್ರಿಶಾ ಕುಲಕರ್ಣಿ ಎಂಬಾಕೆಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದು ಫೋಟೋಸ್ ಕೂಡಾ ವೈರಲ್ ಆಗ್ತಾ ಇದೆ.
ಶ್ರೇಯಸ್ ಅಯ್ಯರ್ ಅವರ ಸೋದರಿ ಕೂಡಾ ಇನ್ಸ್ಟ್ರಾಗ್ರಾಂನಲ್ಲಿ ತ್ರಿಷಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ತ್ರಿಶಾ ಅವರು ಉನ್ನತ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


