ಇಷ್ಟು ದಿನ ಐಪಿಎಲ್ ಪಂದ್ಯಗಳನ್ನು ಕ್ರಿಕೆಟ್ ಪ್ರೇಕ್ಷಕರು ಚಾಚೂ ತಪ್ಪದೆ ನಿರಂತರವಾಗಿ ವೀಕ್ಷಿಸುತ್ತಿದ್ದರು. ಇನ್ನೇನೋ ಐಪಿಎಲ್ ಅಂತಿಮ ಘಟ್ಟ ತಲುಪಿದೆ. ಇಂದು ಚಂಡಿಗಡದ ಮಲ್ಲನ್ ಪುರದಲ್ಲಿ ಮೊದಲ ಕ್ವಾಲಿಫೈಯರ್ ಮ್ಯಾಚ್ ನಡೆಯಲಿದೆ.
ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ. ಇಂದು ಪಂಜಾಬ್ ಕಿಂಗ್ಸ್ ಮತ್ತು ಆರ್ ಸಿಬಿ ಮಧ್ಯೆ ಪಂದ್ಯ ನಡೆಯಲಿದ್ದು ಈ ರಣರೋಚಕ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಪಾಯಿಂಟ್ಸ್ ಪಟ್ಟಿಯ ಪ್ರಕಾರ ಆರ್ ಸಿಬಿ ಎರಡನೇ ಸ್ಥಾನದಲ್ಲಿದೆ. ಇದು ನೆಗೆಟಿವ್ ಆಗಿದ್ರೂ ಇಂದು ಎಲ್ಲವನ್ನು ಪಕ್ಕಕಿಟ್ಟು ವಿಜಯಶಾಲಿಯಾಗುತ್ತಾ…? ಫೈನಲ್ ಪ್ರವೇಶಿಸುತ್ತಾ ಅನ್ನುವಂತ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇಂದು ಸಂಜೆ ಏಳು ಮೂವತ್ತರಿಂದ ಪಂದ್ಯ ಆರಂಭವಾಗಲಿದೆ.

