ನವದೆಹಲಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ತಿರುಗೇಟು ನೀಡುವ ಉದ್ದೇಶದಿಂದ ಶುರುವಾದ ಕಾರ್ಯಾಚರಣೆ ಆಪರೇಷನ್ ಸಿಂಧೂರ. ಇದು ಭಾರತೀಯ ಸೇನೆಯ ಶೌರ್ಯ ಪ್ರದರ್ಶನದ ಹೆಮ್ಮೆಯ ಕಾರ್ಯಾಚರಣೆ. ಇದೀಗ ಭಾರತೀಯ ರಕ್ಷಣಾ ಇಲಾಖೆ ನಾಗರಿಕರಿಗಾಗಿ ಅದ್ಭುತ ಅವಕಾಶವೊಂದನ್ನು ನೀಡುತ್ತಿದೆ.
ಅದೇ ಆಪರೇಷನ್ ಸಿಂಧೂರ ಕುರಿತಾದ ಪ್ರಬಂಧ ಸ್ಪರ್ಧೆ. ಈ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದವರಿಗೆ ಹತ್ತು ಸಾವಿರ ರೂ. ನಗದು ಹಾಗೂ ಆಕರ್ಷಕ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ.
ನಗದು ಬಹುಮಾನದ ಜೊತೆಗೆ ಅಗಸ್ಟ್ ನಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶವನ್ನು ನೀಡಲಾಗುತ್ತದೆ. ಜೂನ್ ೩೦ರೊಳಗೆ ಪ್ರಬಂಧ ಬರೆದು ಭಾರತೀಯ ರಕ್ಷಣಾ ಇಲಾಖೆಗೆ ಕಳುಹಿಸಬೇಕು.

