ಪುತ್ತೂರು: ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರನ್ನು ಗಡೀಪಾರು ಮಾಡುವ ಖಡಕ್ ಆದೇಶ ಬಂದಿದ್ದು, ಜೂನ್ ಆರರಂದು ವಿಚಾರಣೆಗೆ ಹಾಜರಾಗಲು ದಿನ ನಿಗದಿಪಡಿಸಿದೆ.
ದ.ಕ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಆದೇಶ ಹೊರಡಿಸಿರುವ ಕುರಿತ ವಿಚಾರಣೆಯನ್ನು ಜೂನ್ ಆರರಂದು ನಿಗದಿಪಡಿಸಿದ್ದು ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಸೂಚಿಸಲಾಗಿದೆ.
ಪ್ರಕರಣದಲ್ಲಿ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದೆಂದು ತಿಳಿಸಲಾಗಿದೆ.


