ಅಹಮದಾಬಾದ್: ಕ್ರಿಕೆಟ್ ಇತಿಹಾಸದಲ್ಲೇ ಪ್ರತಿಯೊಬ್ಬ ಆರ್ ಸಿಬಿ ಅಭಿಮಾನಿಯೂ ಕೂಡಾ ಸ್ವರ್ಣಾಕ್ಷರದಲ್ಲೇ ಬರೆದಿಡುವಂತಹ ದಿನ ನಿನ್ನೆಯದಾಗಿತ್ತು. 18 ವರ್ಷಗಳ ನಿರಂತರ ತಪಸ್ಸು, ಕೋಟ್ಯಾಂತರ ಅಭಿಮಾನಿಗಳ ಆಸೆ, ಹರಕೆ….ಕೊನೆಗೂ ಫಲಿಸಿದೆ. ಅನೇಕ ವರ್ಷಗಳ ನಂತರ ಕೊನೆಗೂ ರಾಯಲ್ ಚಾಲೆಂಜರ್ಸ್ ಐಪಿಎಲ್ ಚಾಂಪಿಯನ್ಸ್ ಆಗಿ ಮೂಡಿಬಂದಿದೆ.
ನಿನ್ನೆಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತ್ತು. ಪಂಜಾಬ್ ತಂಡ 184 ರನ್ ಮಾಡಿತ್ತು.
ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು ಹದಿನಾರು ಪಂದ್ಯಗಳನ್ನು ಆಡಿದೆ. ಕೊನೆಗೂ ಆರ್ ಸಿಬಿ ವಿನ್ ಆದ ಕೂಡಲೇ ಮೈದಾನದಲ್ಲೇ ಬಿದ್ದು ಆನಂದಬಾಷ್ಪ ಸುರಿಸಿದ ವಿರಾಟ್ ಕೊಹ್ಲಿ ನೋಡಿ ಅದೆಷ್ಟೋ ಅಭಿಮಾನಿಗಳ ಕಣ್ಣಾಲಿಗೆ ತುಂಬಿಕೊಂಡಿತ್ತು. ಮಧ್ಯರಾತ್ರಿ ಅನೇಕ ಕಡೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

