ಕಾರ್ಕಳ: ಮಹಿಳೆಯೋರ್ವರು ಸ್ಕೂಟರ್ ನಲ್ಲಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದು ಸವಾರೆ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.
ನಿಟ್ಟೆ ಗುಂಡಾಜೆ ನಿವಾಸಿ ಯಶವಂತಿ ಶೆಟ್ಟಿ ಮೃತ ದುರ್ದೈವಿ. ಇವರು ಕಾರ್ಕಳದಿಂದ ಮನೆಗೆ ಹೋಗುತ್ತಿದ್ದಾಗ ನಿಟ್ಟೆ ಸಮೀಪ ಒಳರಸ್ತೆಗೆ ಹೋಗಲು ಏಕಾಏಕಿ ಸ್ಕೂಟಿ ಬಲಕ್ಕೆ ತಿರುಗಿಸಿದ್ದಾರೆ. ಆಗ ಈ ದುರಂತ ಸಂಭವಿಸಿದೆ.
ಢಿಕ್ಕಿ ಹೊಡೆದ ಪರಿಣಾಮ ಸವಾರೆಯ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


