ಬಂಟ್ವಾಳ: ಬಂಟ್ವಾಳದ ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಪತ್ತೆಯಾಗಿದ್ದ ನಗರಸಭಾ ಸದಸ್ಯರೋರ್ವರ ಬೈಕ್, ಮೊಬೈಲ್, ಶರ್ಟ್ ಮತ್ತು ಮೊಬೈಲ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಸದಸ್ಯ ರಮೇಶ್ ರೈ ಅವರ ಮೃತದೇಹ ಕೂಡಾ ಪತ್ತೆಯಾಗಿದೆ.
ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು ಅವರು ಮಾತ್ರ ನಿಗೂಢವಾಗಿ ನಾಪತ್ತೆಯಾಗಿದ್ದರು. ಸಿಕ್ಕ ಮೊಬೈಲ್ ನಿಂದ ನಂಬರ್ ಪಡೆದು ಕಾಲ್ ಮಾಡಿದಾಗ ಇದು ರಮೇಶ್ ರೈ ಮೊಬೈಲ್ ಎಂದು ತಿಳಿದುಬಂದಿದೆ.
ರಮೇಶ್ ರೈ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿ ಕೊನೆಗೂ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಆಗಮಿಸಿದ್ದಾರೆ.


