ಕಾರ್ಕಳ: ತನ್ನ ಇಬ್ಬರು ಗಂಡು ಮಕ್ಕಳು ವಿಪರೀತ ಕುಡಿತದ ಚಟ ಹೊಂದಿದ್ದ ಕಾರಣಕ್ಕಾಗಿ ಮನನೊಂದು ತಾಯಿಯೋರ್ವರು ನೇಣಿಗೆ ಶರಣಾದ ಘಟನೆ ಕಾರ್ಕಳದ ಬಾರಾಡಿಯಲ್ಲಿ ನಡೆದಿದೆ.
ಐವತ್ತೊಂಭತ್ತು ವರ್ಷದ ಗಿರಿಜಾ ಎಂಬವರು ಜೀವಾಂತ್ಯಗೊಳಿಸಿದ ಮಹಿಳೆ. ಇವರ ಗಂಡು ಮಕ್ಕಳಾದ ಅಶೋಕ ಮತ್ತು ಅಜಿತ್ ಎಂಬವರು ವಿಪರೀತ ಕುಡಿತದ ಚಟ ಹೊಂದಿದ್ದರು. ಒಂದೇ ಮನೆಯಲ್ಲಿದ್ದು ಕುಡಿದು ಬಂದು ಪ್ರತಿನಿತ್ಯ ಜಗಳವಾಡುತ್ತಿದ್ದರು.
ಎರಡು ದಿನದ ಹಿಂದೆ ಕಲ್ಲಿನಿಂದ ಪರಸ್ಪರ ಹೊಡೆದಾಡಿಕೊಂಡು ಜಗಳವಾಡುತ್ತಿದ್ದಾಗ ತಾಯಿ ಗಿರಿಜಾ ಎಷ್ಟು ಹೇಳಿದರೂ ಕೇಳಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

