ಬೆಂಗಳೂರು: ಹದಿನೆಂಟು ವರ್ಷಗಳ ಬಳಿಕ ಕಪ್ ನಮ್ಮದಾದ ಸಂಭ್ರಮ ಹದಿನೆಂಟು ಗಂಟೆಯೂ ಉಳಿಯಲಿಲ್ಲ. ಸಂಭ್ರಮಾಚರಣೆ ದುರಂತವಾಗಿ ಮಾರ್ಪಟ್ಟಿತು. ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ತಂಡದ ವಿಜಯೋತ್ಸವದಲ್ಲಿ ಮೂಲ್ಕಿ ಮೂಲದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸಿಎ ಪದವೀಧರೆ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅಕ್ಷತಾ ಪೈ ಮೃತಪಟ್ಟ ದುರ್ದೈವಿ. ಪತಿ ಸಿದ್ಧಾಪುರ ಮೂಲದವರಾಗಿದ್ದು ಸಾಫ್ಟ್ವೇರ್ ಉದ್ಯೋಗಿಯಾಗಿದ್ದರು.
ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾಗ ನಡೆದ ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೊಳಗಾಗಿ ಅಕ್ಷತಾ ಮೃತಪಟ್ಟಿದ್ದಾರೆ. ದುರಾದೃಷ್ಟವಶಾತ್ ಹನ್ನೊಂದು ಮಂದಿ ಈ ದುರಂತದಲ್ಲಿ ಇಹಲೋಕ ತ್ಯಜಿಸಿದ್ದಾರೆ.

