ಕಿನ್ನಿಗೋಳಿ: ಗ್ಯಾರೇಜ್ ನಲ್ಲಿ ರಿಪೇರಿಗೆಂದು ಇಟ್ಟಿದ್ದ ಇನೋವಾ ಕಾರು ಮೇಲೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಭಸ್ಮವಾದ ಘಟನೆ ಇಂದು ಮಧ್ಯಾಹ್ನ ಕಿನ್ನಿಗೋಳಿಯ ಮೂರು ಕಾವೇರಿಯಲ್ಲಿ ನಡೆದಿದೆ.
ಮೂರು ಕಾವೇರಿಯ ಗ್ಯಾರೇಜ್ ಒಂದರಲ್ಲಿ ಇಟ್ಟಿದ್ದ ಕಾರು ಧಗಧಗನೆ ಹೊತ್ತಿ ಉರಿದಿದೆ. ಕೂಡಲೇ ಗ್ಯಾರೇಜ್ ಕಾರ್ಮಿಕರು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ.
ಸಮೀಪದಲ್ಲೇ ದೊಡ್ಡ ವಾಹನಗಳಿದ್ದರೂ ಅದೃಷ್ಟವಶಾತ್ ಅಪಾಯವೊಂದು ತಪ್ಪಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

