ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿರುವ ನಿಖಿಲ್ ಸೋಸಲ್ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆ ಅವರ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದು ಬಂಧನಕ್ಕೆ ತಡೆ ನೀಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸಿಎಂನ ಆದೇಶಕ್ಕೆ ಅನುಗುಣವಾಗಿ ಕಾನೂನುಬಾಹಿರವಾಗಿ ಪತಿಯನ್ನು ಬಂಧಿಸಲಾಗಿದೆ. ಇದರಿಂದ ನಿಖಿಲ್ ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಟಗಾರರನ್ನು ಏರ್ಪೋರ್ಟ್ ನಿಂದ ಸ್ವಾಗತ ಮಾಡಿರುವುದರಿಂದ ಹಿಡಿದು ವಿಧಾನಸೌಧದಲ್ಲಿ ಆಟಗಾರರನ್ನು ಅಭಿನಂದಿಸಿ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ಸಿಎಂ, ಡಿಸಿಎಂ ಡಿಕೆಶಿ ಅವರೂ ಭಾಗಿಯಾಗಿದ್ದರು. ಅವರ ಮೇಲೆ ಅಪವಾದ ಬರದಂತೆ ಈ ರೀತಿ ಇವರ ಮೇಲೆ ಎಫ್ಐಆರ್ ಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

