ನವದೆಹಲಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪಾಕಿಸ್ತಾನ ಭಾರತೀಯರ ಮೇಲೆ ಯುದ್ಧ ಮಾಡಿದ ಬಳಿಕ ಅನೇಕ ವಿಚಾರಗಳಲ್ಲಿ ಭಾರತ ತಕ್ಕ ಬುದ್ಧಿ ಕಲಿಸುತ್ತಲೇ ಬಂದಿದೆ. ಇದೀಗ ಪಾಕಿಸ್ತಾನ ನೀರಿಗಾಗಿ ಭಾರತವನ್ನು ಪರಿ ಪರಿಯಾಗಿ ಬೇಡಿಕೊಳ್ಳುವ ಪರಿಸ್ಥಿತಿ ಒದಗಿಬಂದಿದೆ.
ಎಪ್ರಿಲ್ ನಿಂದ ಇಲ್ಲಿಯವರೆಗೂ ಭಾರತದ ಜಲಶಕ್ತಿ ಸಚಿವಾಲಯಕ್ಕೆ ನಾಲ್ಕು ಬಾರಿ ಪತ್ರ ಬರೆದು ಇಂಡಸ್ ನದಿ ನೀರಿಗಾಗಿ ಭಿಕ್ಷೆ ಬೇಡುತ್ತಿದೆ. ಪಾಕಿಸ್ತಾನದ ನಾಲ್ಕು ಪತ್ರಕ್ಕೂ ಭಾರತ ಖಡಕ್ ಉತ್ತರ ನೀಡಿದೆ.
ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಸ್ಪರ ನಂಬಿಕೆಯ ಆಧಾರದ ಮೇಲೆ ಮಾಡಿಕೊಳ್ಳಲಾಗಿತ್ತು. ಆದರೆ ಪಾಕಿಸ್ತಾನ ನಂಬಿಕೆ ಮುರಿದಿದೆ. ಹೀಗಾಗಿ ಇಂಡಸ್ ನದಿ ನೀರನ್ನು ಪಾಕ್ ಗೆ ಹರಿಸಲ್ಲ ಎಂದು ಸ್ಪಷ್ಟಪಡಿಸಿದೆ.

