ಇದು ಹೇಳಿ ಕೇಳಿ ಹಲಸಿನ ಹಣ್ಣಿನ ಸೀಸನ್. ಈ ಹಣ್ಣು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಕರಾವಳಿಯಲ್ಲಂತೂ ಇದನ್ನು ಬಾಯಿ ಚಪ್ಪರಿಸಿ ತಿಂತಾರೆ. ಇದರ ಬೀಜವನ್ನೂ ಬಿಸಾಕದೆ ಅನೇಕ ರೀತಿಯ ಖಾದ್ಯಗಳನ್ನು ರೆಡಿ ಮಾಡಿಕೊಂಡು ಸೇವಿಸುತ್ತಾರೆ. ಇದರಿಂದ ಅನೇಕ ರೀತಿಯ ಪ್ರಯೋಜನಗಳಿವೆ ಗೊತ್ತಾ…?
ಹಲಸಿನ ಹಣ್ಣಿನ ತೊಳೆಗಳಂತೆ ಬೀಜದಲ್ಲೂ ಕೂಡಾ ಸಮೃದ್ಧವಾದ ಪೋಷಕಾಂಶಗಳಿವೆ. ರಕ್ತದಲ್ಲಿ ಕಬ್ಬಿನಾಂಶ ಹೆಚ್ಚಾಗಲು ಕೂಡಾ ಹಲಸಿನ ಬೀಜ ಸಹಕಾರಿಯಾಗುತ್ತದೆ. ಇದನ್ನು ಪದಾರ್ಥದಲ್ಲೂ ಕೂಡಾ ಉಪಯೋಗಿಸುತ್ತಾರೆ.
ಹಲಸಿನ ಬೀಜದಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿದ್ದು ದೃಷ್ಟಿ ದೋಷ, ಕಣ್ಣಿನ ಪೊರೆ, ಕಣ್ಣು ಮಂಜಾಗುವಂತಹ ಅನೇಕ ಸಮಸ್ಯೆಗಳನ್ನು ದೂರ ಮಾಡಲು ಹಲಸಿನ ಬೀಜ ಅತ್ಯಂತ ಉಪಯುಕ್ತವಾಗಿದೆ. ಹೀಗೆ ಕೇವಲ ಹಲಸಿನ ಹಣ್ಣಿನಿಂದ ಮಾತ್ರವಲ್ಲ…ಹಲಸಿನ ಬೀಜದಿಂದಲೂ ಕೂಡಾ ಆರೋಗ್ಯಕ್ಕೆ ಪೂರಕವಾದ ಅನೇಕ ಲಾಭಗಳಿವೆ.

