ಕಾರ್ಕಳ: ಕಂಟ್ರೋಲ್ ತಪ್ಪಿ ಸ್ಕೂಟರೊಂದು ನೀರಿಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದಿದೆ. ಕೆ.ಸುಬ್ರಹ್ಮಣ್ಯ ಮೃತಪಟ್ಟ ದುರ್ದೈವಿ.
ಇವರು ರಾತ್ರಿ ಮನೆಯಿಂದ ಸ್ಕೂಟರ್ ನಲ್ಲಿ ಕಾರ್ಕಳ ಪೇಟೆಗೆ ಹೋಗಿದ್ದರು. ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ನಕ್ರೆ ಪರಪ್ಪು ಸೇತುವೆಯ ಬಳಿ ಸ್ಕೂಟರ್ ಸಮೇತ ನೀರಿನಲ್ಲಿ ಬಿದ್ದು ಮುಳುಗಿರುವುದು ಕಂಡುಬಂದಿತ್ತು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

