ಕುಂದಾಪುರ: ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಚಾಲಕನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಮೂವತ್ತೈದು ವರ್ಷದ ಸೋಮಪ್ಪ ಬಂಧಿತ ಆರೋಪಿ.
ಕುಂದಾಪುರದ ಗೋಪಾಡಿಯ ಶಾಂತಿನಗರ ಜಂಕ್ಷನ್ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ನಿರೀಕ್ಷಕ ನಂಜನಾಯ್ಕ ಅವರು ವಾಹನ ತಪಾಸಣೆ ಮಾಡುತ್ತಿದ್ದಾಗ ಟಿಪ್ಪರ್ ನಲ್ಲಿ ಕಲ್ಲು ಸಾಗಾಟ ಮಾಡುತ್ತಿರೋದು ಗಮನಕ್ಕೆ ಬಂದಿದೆ.
ಪರವಾನಗಿ ಇಲ್ಲದೆ ೪೫೦ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದು ಚಾಲಕನನ್ನು ಬಂಧಿಸಲಾಗಿದೆ. ಜೊತೆಗೆ ಕಲ್ಲು, ಹತ್ತೊಂಬತ್ತು ಸಾವಿರ ರೂ ಹಣ ಮತ್ತು ಟಿಪ್ಪರ್ ಅನ್ನು ವಶಕ್ಕೆ ಪಡೆಯಲಾಗಿದೆ.

