ಸಿನಿಮಾ ರಂಗದಲ್ಲಿ ಅದೆಷ್ಟೋ ಸೆಲೆಬ್ರಿಟಿಗಳು ದುಡಿದು ಹೆಸರು ಗಳಿಸಿ ಕೋಟ್ಯಾಧೀಶರಾಗಿರುತ್ತಾರೆ. ಕೂತು ಉಣ್ಣುವಷ್ಟು ಸಂಪಾದನೆ ಮಾಡಿರುತ್ತಾರೆ. ಸಿನಿಮಾವನ್ನೇ ನಂಬಿಕೊಂಡು ಸಾವಿರಾರು ಕೋಟಿ ಸಂಪಾದಿಸಿರುವ ದೊಡ್ಡ ಕುಟುಂಬಗಳಲ್ಲಿ ಮೊದಲ ಸ್ಥಾನ ಕಪೂರ್ ಕುಟುಂಬದ್ದು.
ಬಾಲಿವುಡ್ ನ ಈಗಿನ ಸ್ಟಾರ್ ನಟ ರಣಬೀರ್ ಕಪೂರ್, ಪತ್ನಿ ಆಲಿಯಾ ಭಟ್ ನ ಮುದ್ದಾದ ಮಗಳು ರಾಹಾಗೆ ಈಗ ಎರಡು ವರ್ಷ. ಆಕೆ ಇದೀಗ ಇನ್ನೂರ ಐವತ್ತು ಕೋಟಿ ಒಡತಿ. ಕಪೂರ್ ಕುಟುಂಬ ಬಾಲಿವುಡ್ನ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದು. ಮುಂಬೈ ಹಾಗೂ ಉತ್ತರ ಭಾರತದ ಇತರೆ ಕೆಲವು ನಗರಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಆಸ್ತಿಗಳನ್ನು ಈ ಕುಟುಂಬದವರು ಹೊಂದಿದ್ದಾರೆ.
ರಣ್ಬೀರ್ ಕಪೂರ್ ತಮ್ಮ ತಾತ ರಾಜ್ ಕಪೂರ್ ಅವರ ಬಾಂದ್ರಾದ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಅಲ್ಲಿ ಒಂದು ಬಲು ಐಶಾರಾಮಿಯಾದ ಮನೆ ನಿರ್ಮಾಣ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷದಿಂದಲೂ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮನೆಯ ಒಟ್ಟು ಮೌಲ್ಯ ಇನ್ನೂರ ಐವತ್ತು ಕೋಟಿ ರೂಪಾಯಿಗಳು ಎನ್ನಲಾಗುತ್ತಿದ್ದು ಈ ಮನೆಯನ್ನೂ ಪುತ್ರಿ ರಾಹಾ ಹೆಸರಿಗೆ ಮಾಡಿದ್ದಾರಂತೆ.

