ಉಡುಪಿ: ಕ್ಲೈಮ್ ಕೇಳಿದಾಗ ನೆವನ ಹೇಳಿ ಗ್ರಾಹಕರನ್ನು ಅಲೆದಾಡಿಸುವ ವಿಮಾ ಕಂಪೆನಿಗಳ ಅಹಂಕಾರಕ್ಕೆ ಕೊನೆಗೂ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಸರಿಯಾದ ಕಾರಣ ಇಲ್ಲದೆ ಕ್ಲೇಮ್ ನಿರಾಕರಿಸಿ ಗ್ರಾಹಕನಿಗೆ ಮಾನಸಿಕ ಹಿಂಸೆ ನೀಡಿದ ಇನ್ಶೂರೆನ್ಸ್ ಕಂಪೆನಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ಸಿದ್ಧಾಪುರದ ನಿವಾಸಿ ಏಕನಾಥ ಕಾಮತ್ ಅವರು ಅನಾರೋಗ್ಯಕ್ಕೀಡಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ವಿಮಾ ಪಾಲಿಸಿ ಎಂಬ ಧೈರ್ಯದಲ್ಲಿದ್ದರು. ಆದರೆ ಕ್ಲೇಮ್ ಅರ್ಜಿ ತಿರಸ್ಕರಿಸಿ ಇವರು ಅನೇಕ ರೀತಿಯ ಮಾನಸಿಕ ಯಾತನೆ ಅನುಭವಿಸಿದರು.
ವಿಮಾ ಕಂಪೆನಿಯ ವಿರುದ್ಧ ಹೋರಾಡಿದ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಗ್ರಾಹಕನಿಗೆ ಅನ್ಯಾಯವಾಗಿದೆ ಎಂದು ಮನಗಂಡ ನ್ಯಾಯಾಲಯ ವಿಮಾ ಕಂಪೆನಿಗೆ ಸಂತ್ರಸ್ತನಿಗೆ ಬಡ್ಡಿ ಸಮೇತ ಪರಿಹಾರ ನೀಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

