ಮಧ್ವಾಚಾರ್ಯರು ಸ್ಥಾಪಿಸಿದ ಎಂಟು ಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠದ ಅಧೀನಕ್ಕೆ ಒಳಪಡುವ ಸರ್ವಶ್ರೇಷ್ಠ ಕಾಲೇಜು ಅಂದ್ರೆ ನಿರಾಮಯ ಆರೋಗ್ಯ ವಿಜ್ಞಾನ ಕಾಲೇಜು. ಶಿಸ್ತುಬದ್ಧ ಜೀವನಕ್ಕೆ, ವೃತ್ತಿಪರ ಮಾರ್ಗೋಪಾಯಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ದಾಪುಗಾಲಿಡುತ್ತಾ ಸಾಗಿ ಬಂದ ಈ ಸಂಸ್ಥೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಜ್ಞಾನಾರ್ಜನೆಗೈದಿದ್ದಾರೆ.
ಕೃಷ್ಣನಗರಿ (ಉಡುಪಿ)ಯಲ್ಲಿ ಇರುವ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ನಿರಾಮಯ ಕಾಲೇಜು ಹೆಸರಿನಂತೆ ಶೈಕ್ಷಣಿಕ ವಿಷಯದಲ್ಲೂ ವಿಭಿನ್ನ ಪಾತ್ರ ವಹಿಸಿದ ಹೆಮ್ಮೆಯ ಶಿಕ್ಷಣ ಸಂಸ್ಥೆ. ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಎಜ್ಯುಕೇಶನ್ ಸೊಸೈಟಿಯ ಅಂಗವಾಗಿರುವ ಇಲ್ಲಿ ಪ್ರಸಕ್ತ ಸಾಲಿನ ಬಿಎಸ್ಸಿ ಕೋರ್ಸ್ ಗಳಿಗೆ ದಾಖಲಾತಿ ಆರಂಭಗೊಂಡಿದೆ.
ಬಿಎಸ್ಸಿ ನರ್ಸಿಂಗ್, ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿಎಸ್ಸಿ ಅನಸ್ತೇಶಿಯ ಆ್ಯಂಡ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಇತ್ಯಾದಿ ನಾಲ್ಕು ವರ್ಷದ ಕೋರ್ಸ್ ಗಳಿಗೆ ಕೆಲವೇ ಸೀಟುಗಳು ಲಭ್ಯವಿದ್ದು ಆಸಕ್ತರು ಶೀಘ್ರವಾಗಿ ದಾಖಲಾತಿ ಮಾಡಿಸಿಕೊಳ್ಳಿ.
ನಿರಾಮಯ ಕಾಲೇಜಿನ ವಿಶೇಷತೆ ಎಂದರೆ ಇಲ್ಲಿ ನುರಿತ ಹಾಗೂ 20 ವರ್ಷ ಅನುಭವ ಹೊಂದಿರುವ ಪರಿಣಿತ ಉಪನ್ಯಾಸಕರ ತಂಡವಿದ್ದು ಆಧುನಿಕ ತರಗತಿಯ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯ, ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾದ ಹಾಸ್ಟೆಲ್ ಸೌಲಭ್ಯ, ಹಾಗೂ ಉಚಿತ ಕಾಲೇಜ್ ಬಸ್ ವ್ಯವಸ್ಥೆ ಕೂಡ ಇದೆ. ಇದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಕಾಲರ್ ಶಿಪ್ ವ್ಯವಸ್ಥೆ, ನೂರು ಶೇಕಡ ಉದ್ಯೋಗವಕಾಶ, ಆಧುನಿಕ ಲ್ಯಾಬೋರೇಟರಿ ತರಬೇತಿ, ಬ್ಯಾಂಕ್ ಲೋನ್, ತಜ್ಞ ವೈದ್ಯರಿಂದ ಪ್ರಾಯೋಗಿಕ ಶಿಕ್ಷಣ ಮುಂತಾದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು.
ಉತ್ತಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಇಲ್ಲಿ ಅನೇಕ ರೀತಿಯ ಆಯ್ಕೆಗಳಿವೆ. ಪ್ರಬುದ್ಧ ಗುಣಮಟ್ಟದ ಶಿಕ್ಷಣಕ್ಕೆ ಇಂದೇ ಭೇಟಿ ನೀಡಿ ನಿರಾಮಯ ಆರೋಗ್ಯ ವಿಜ್ಞಾನ ವೈದ್ಯಕೀಯ ಕಾಲೇಜು ವಿಶ್ವೋತ್ತಮನಗರ್ ಬಂಟಕಲ್. ಕಾಪು ತಾಲ್ಲೂಕು, ಉಡುಪಿ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ 8197872555 ಅಥವಾ 6361437963 ಈ ನಂಬರನ್ನು ಸಂಪರ್ಕಿಸಿ. ಇಮೇಲ್ ವಿಳಾಸ-office.nihs@sode-edu-in


