ಮೂಡುಬಿದಿರೆ: ಮೊನ್ನೆ ತಾನೇ ಬೆಂಕಿ ಕೆನ್ನಾಲಿಗೆಯ ದುರಂತಕ್ಕೆ ಎರಡು ಕೋಣಗಳು ಪ್ರಾಣ ಬಿಟ್ಟಿದ್ದವು. ಇದರ ಬೆನ್ನಲ್ಲೇ ಇದೀಗ ಕಂಬಳಕೂಟದಲ್ಲಿ ಎಲ್ಲರೊಂದಿಗೆ ಹಸ್ತ ಲಾಘವ ಮಾಡುತ್ತಿದ್ದ ಚೀಂಕ್ರ ಕೋಣ ಸಾವನ್ನಪ್ಪಿದೆ.
ಬೆಳುವಾಯಿ ಪೇರೋಡಿ ಪುತ್ತಿಗೆ ಗುತ್ತಿನ ಕೋಣ ಇದಾಗಿದ್ದು ಜ್ವರದಿಂದ ಅಕಾಲಿಕ ಮರಣ ಹೊಂದಿದೆ. ಕಂಬಳ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಕೋಣ ಅತ್ಯಂತ ಸೌಮ್ಯ ಸ್ವಭಾವದಾಗಿದ್ದು ತಲೆ ಅಲ್ಲಾಡಿಸುತ್ತಾ ಬೆರೆಯುತ್ತಿತ್ತು.
ಹಗ್ಗ ಕಿರಿಯ ವಿಭಾಗದಲ್ಲಿ ಅನೇಕ ಪ್ರಶಸ್ತಿಗಳನ್ನು ಚೀಂಕ್ರ ಕೋಣ ಪಡೆದುಕೊಂಡಿತ್ತು. ಚೀಂಕ್ರನ ಅಗಲಿಕೆಗೆ ಕಂಬಳಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.


