ಕಾರ್ಕಳ: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆಯ ವಿಷ್ಣುಮೂರ್ತಿ ದೇಗುಲದ ಸಮೀಪ ಜೂನ್ ಆರರಂದು ನಾಯಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರ ಸಾವಿಗೆ ಕಾರಣರಾದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಆರೋಪಿಗಳ ಮಾಹಿತಿ ನೀಡಿದರೆ ನಗದು ಬಹುಮಾನ ಕೂಡಾ ಘೋಷಣೆಯಾಗಿದೆ.
ಮೃತಪಟ್ಟ ನಾಯಿಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಅದಕ್ಕೆ ವಿಷವುಣಿಸಿರುವುದು ದೃಢಪಟ್ಟಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಪೆಟಾ ಸಂಸ್ಥೆ ಆರೋಪಿಗಳ ಸುಳಿವು ನೀಡಿದವರಿಗೆ ಐವತ್ತು ಸಾವಿರ ಬಹುಮಾನ ನೀಡಿರುವುದಾಗಿ ಘೋಷಿಸಿದೆ. ಮಾಹಿತಿ ಕೊಟ್ಟವರ ಬಗ್ಗೆ ಕೂಡಾ ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

