ಕಾಂತಾರ ಚಿತ್ರ ತಂಡಕ್ಕೆ ಮೇಲಿಂದ ಮೇಲೆ ವಿಘ್ನಗಳು ಬರುತ್ತಿವೆ. ಕಾಂತಾರ ಚಿತ್ರ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಕಲಾವಿದನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿಯ ಆಗುಂಬೆ ಸಮೀಪ ನಡೆದಿದೆ.
ಕೇರಳ ಮೂಲದ ಮಿಮಿಕ್ರಿ ಕಲಾವಿದ ವಿಜು ಎಂಬಾತ ಕಾಂತಾರ ಚಿತ್ರಕ್ಕಾಗಿ ಆಗುಂಬೆಯ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು. ನಿನ್ನೆ ರಾತ್ರಿ ಏಕಾ ಏಕಿ ವಿಪರೀತ ಎದೆ ನೋವು ಬಂದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

