ಗಾಂಧೀನಗರ: ಅಹಮದಾಬಾದ್ ನಲ್ಲಿ ನಿನ್ನೆ ನಡೆದ ವಿಮಾನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಅಪಘಾತದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನವೂ ಸುಟ್ಟು ಬೂದಿಯಾಗಿದೆ. ಆದರೆ ವಿಮಾನದ ಅವಶೇಷಗಳಲ್ಲಿ ಭಗವದ್ಗೀತೆ ಪುಸ್ತಕವೊಂದು ಸಿಕ್ಕಿದ್ದು ಇದಕ್ಕೆ ಮಾತ್ರ ಏನೂ ಹಾನಿಯಾಗಿಲ್ಲ.
ಭಗವದ್ಗೀತೆಯ ಒಂದು ಆವೃತ್ತಿಯೂ ಹಾನಿಯಾಗದೆ ಸಿಕ್ಕಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ. ಇದು ಹೇಗೆ ಎಂದು ಎಲ್ಲರೂ ಮೂಗಿನ ಮೇಲೆ ಕೈಯಿಟ್ಟಿದ್ದಾರೆ.
ಹಾನಿಯಾಗದ ಪುಟವನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

