ಬೆಂಗಳೂರು: ರಾಜ್ಯದಲ್ಲಿ ಹಗರಣ, ಮೋಸ, ವಂಚನೆ ಪ್ರಕರಣಗಳು ನಡೆಯೋದು ಅಪರೂಪವೇನಲ್ಲ. ಆದರೆ ಇಲ್ಲಿ ಕೋಟ್ಯಾಂತರ ರೂ ಹಗರಣದಲ್ಲಿ ಮುಖ್ಯ ನಾಯಕರೇ ಐಪಿಎಸ್ ಅಧಿಕಾರಿಗಳು. ವ್ಯವಸ್ಥೆಯಲ್ಲಿ ಕಾನೂನು ಕಾಯಬೇಕಾದವರೇ ಕಳ್ಳರಾದರೆ ಹೇಗೆ ಹೇಳಿ..ಹೌದು ಲೋಕಾಯುಕ್ತ ಅಧಿಕಾರಿಗಳೇ ಸರ್ಕಾರಿ ಅಧಿಕಾರಿಗಳಿಗೆ ದಾಳಿ ಮಾಡುವ ಬೆದರಿಕೆಯೊಡ್ಡಿ ಕೋಟ್ಯಾಂತರ ರೂ ಹಣ ವಸೂಲಿ ಮಾಡಿದ ಹಗರಣ ಇದೀಗ ಬೆಳಕಿಗೆ ಬಂದಿದೆ.
ನಿಂಗಪ್ಪ ಎನ್ನುವ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದರು. ಈತ ಹಣ ವಸೂಲಿ ಮಾಡಿ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿಗೆ ಪಾಲು ಕೊಟ್ಟಿದ್ದ ಎನ್ನಲಾಗಿದೆ. ಸಾಕ್ಷಿ ಸಮೇತ ಕೂಡಾ ಇದು ಬಯಲಾಗಿದೆ.
ವಸೂಲಿ ಮಾಡಿದ್ದ ಕೋಟಿ ಕೋಟಿ ಹಣವನ್ನು ಬಿಟ್ ಕಾಯಿನ್ ಮುಖೇನ ಹೂಡಿಕೆ ಮಾಡುತ್ತಿದ್ದರು. ಇದೀಗ ಬ್ಲ್ಯಾಕ್ಮೇಲ್, ಹಣ ವಸೂಲಿ ಆರೋಪದ ಮೇಲೆ ಶ್ರೀನಾಥ್ ಜೋಶಿಯನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

