ಹಿರಿಯಡ್ಕ: ಮೆದುಳಿನ ಆಘಾತದಿಂದ ಸಾವನ್ನಪ್ಪಿದ್ದ ಮಗಳ ಚಿಂತೆಯಿಂದ ಮನನೊಂದು ಆಕೆಯ ತಾಯಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಹಿರಿಯಡ್ಕದ ಪೆರ್ಡೂರಿನಲ್ಲಿ ನಡೆದಿದೆ.
ಪೆರ್ಡೂರು ಗ್ರಾಮದ, ಐವತ್ತೆರಡು ವರ್ಷದ ಲತಾ ಮೃತ ದುರ್ದೈವಿ. ಮೃತರ ಗಂಡ ಸುಮಾರು ಇಪ್ಪತ್ತು ವರ್ಷದ ಹಿಂದೆಯೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇನ್ನು ಕಳೆದ ಮೂರು ತಿಂಗಳ ಹಿಂದೆ ಇದ್ದ ಒಬ್ಬ ಮಗಳೂ ಮೆದುಳಿನ ಆಘಾತದಿಂದ ಸಾವನ್ನಪ್ಪಿದರು.
ಇದರಿಂದ ಜರ್ಜರಿತಗೊಂಡ ಲತಾ ಅವರು ಮನನೊಂದು ಮಲಗುವ ಕೋಣೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


