ಆಧುನಿಕ ಕಾಲಘಟ್ಟದಲ್ಲಿ ನಮ್ಮ ಬದಲಾದ ಜೀವನ ಶೈಲಿಯಿಂದ ಆಹಾರ ಕ್ರಮವೂ ಬದಲಾಗಿ ಬಿಟ್ಟಿದೆ. ಅತಿಯಾದ ಬೊಜ್ಜು, ಹೊಟ್ಟೆ ಕೊಬ್ಬನ್ನು ಕರಗಿಸೋದೆ ಒಂದು ಸಾಹಸವಾಗಿ ಬಿಟ್ಟಿದೆ. ಇದಕ್ಕಾಗಿ ಯೋಗ, ಡಯೆಟ್, ಜಿಮ್ ಏನಾದರೊಂದು ಮಾಡ್ತಾನೇ ಇರ್ತೇವೆ. ಇದೆಲ್ಲದರ ಜೊತೆಗೆ ಮನೆಯಲ್ಲೇ ಡಿಟಾಕ್ಸ್ ಡ್ರಿಂಕ್ಸ್ ಮಾಡಿ ಕುಡಿಯುವುದರಿಂದ ಕೂಡಾ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.
ನಿಂಬೆ, ಸೌತೆಕಾಯಿ, ಪುದೀನಾದಂತಹ ಗಿಡಮೂಲಿಕೆಗಳನ್ನು ತುಂಬಿರುವ ಡಿಟಾಕ್ಸ್ ವಾಟರ್ ನಿಮ್ಮನ್ನು ಪ್ರತೀ ದಿನ ಹೈಡ್ರೇಟ್ ಆಗಿಡಲು ಮತ್ತು ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಕೂಡಾ ತೂಕ ಇಳಿಕೆಯಾಗುತ್ತದೆ.
ಶುಂಠಿ, ನಿಂಬೆಹಣ್ಣು, ಪುದೀನಾ ಸೊಪ್ಪು, ಕಿತ್ತಳೆ ಹಣ್ಣಿನ ಹೋಳು, ಕಲ್ಲಂಗಡಿ, ದಾಲ್ಚಿನ್ನಿ, ಸೇಬು ಹಣ್ಣಿನ ಸಿಪ್ಪೆ ಹೀಗೆ ಮನೆಯಲ್ಲೇ ಮಾಮೂಲಾಗಿ ಸಿಗುವ ಆಹಾರ ಪದಾರ್ಥಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ದೇಹಕ್ಕೆ ಅನೇಕ ಲಾಭಗಳನ್ನು ಇದು ನೀಡುತ್ತದೆ. ಜೀರ್ಣಕ್ರಿಯೆಗೆ ಈ ಡಿಟಾಕ್ಸ್ ವಾಟರ್ ಸಹಕರಿಸುವುದರಿಂದ ತೂಕದ ಇಳಿಕೆ, ಹೊಟ್ಟೆಯ ಕೊಬ್ಬು ಕರಗಿಸಲು ಕೂಡಾ ಸಹಕಾರಿಯಾಗುತ್ತದೆ.

